Sunday, August 28, 2022

Dr Babu Jagjivan Ram Leather Industries Development Corporation loan application 2022-23 - suvidha karnataka loan online 2022 - Babu Jagjivan Ram self employment loan 2022-23

 

dr babu jagjivan ram

ಬಾಬು ಜಗಜೀವನ್ ರಾಮ್ ಲೆದರ್ ಇಂಡಸ್ಟ್ರೀಸ್ ಡೆವಲಪ್ಮೆಂಟ್ ಕಾರ್ಪೊರೇಶನ್ ಲಿಮಿಟೆಡ್ 2022


1 ಚರ್ಮಶಿಲ್ಪ

2 .ಸ್ವಾವಲಂಬಿ ಸಂಚಾರಿ ಮಾರಾಟ ಮಳಿಗೆ

3.ದುಡಿಮೆ ಬಂಡವಾಳ ಸಹಾಯ ಯೋಜನೆ

4. ಪಾದುಕೆ ಕುಟೀರ” ಒದಗಿಸುವ ಯೋಜನೆ

1 ಚರ್ಮಶಿಲ್ಪ

  • ಉದ್ದೇಶ 

ಚರ್ಮ ಕುಶಲಕರ್ಮಿ ಕುಟುಂಬದ ಅಕ್ಷರಸ್ಥ ಯುವಕ/ ಯುವತಿಯರು ಸ್ವಯಂ ಉದ್ಯೋಗ ಕೈಗೊಳ್ಳಲು ಅನುಕೂಲ ಮಾಡಿಕೊಡುವ ಉದ್ದೇಶ ಹೊಂದಲಾಗಿದೆ

  • ವಿವರಗಳು 

ಚರ್ಮಕಾರರ ಸಮುದಾಯಕ್ಕೆ ಸೇರಿದ ಅಕ್ಷರಸ್ಥ, ನಿರುದ್ಯೋಗಿ, ಯುವಕ/ಯುವತಿಯರಿಗೆ ಸ್ವಯಂ ಉದ್ಯೋಗ ಕಲ್ಪಿಸುವ ದೃಷ್ಟಿಯಿಂದ ವೈಯಕ್ತಿಕ/ಕುಶಲಕರ್ಮಿಗಳ ಸಹಕಾರ ಸಂಘ/ ಸ್ವ-ಸಹಾಯ ಸಂಘಗಳು ಈ ಯೋಜನೆರಡಿ ಆರ್ಥಿಕ ಚಟುವಟಿಕೆಗಳನ್ನು ಹಮ್ಮಿಕೊಳ್ಳಬಹುದಾಗಿದೆ.

ಪಾರಂಪರಿಕ ಚರ್ಮ ಕುಶಲಕರ್ಮಿಗಳು ಅವರು ತಯಾರಿಸಿದ ಚರ್ಮೋತ್ಪನ್ನಗಳನ್ನು ಗ್ರಾಹಕರಿಗೆ ನೇರವಾಗಿ ಮಾರಾಟ ಮಾಡಲು ಮತ್ತು ವಿವಿಧ ಬ್ರಾಂಡ್‍ಗಳ ಪಾದರಕ್ಷೆ/ಶೂ ಮತ್ತು ಇತರೆ ಉತ್ಪನ್ನಗಳನ್ನು ಮಾರಾಟ ಮಾಡಲು ಸ್ವಂತ ಮಾರಾಟ ಮಳಿಗೆ ಪ್ರಾರಂಭಿಸಿ ಸ್ವಾವಲಂಬಿ ಜೀವನವನ್ನು ಕಲ್ಪಿಸಿಕೊಳ್ಳಬಹುದಾಗಿದೆ.

ಈ ಚಟುವಟಿಕೆಗಳ ಮೂಲಕ ಕುಶಲಕರ್ಮಿಗಳು ತಯಾರಿಸಿದ ಉತ್ಪನ್ನಗಳನ್ನು ನೇರವಾಗಿ ಗ್ರಾಹಕರಿಗೆ ತಲುಪಿಸುವ ವ್ಯವಸ್ಥೆ ಕಲ್ಪಿಸಿದಂತಾಗುತ್ತದೆ.

ಮೇಲಿನ ಆರ್ಥಿಕ ಚಟುವಟಿಕೆಗಳನ್ನು ಅನುಷ್ಟಾನಗೊಳಿಸಲು ಬ್ಯಾಂಕ್ ಸಾಲ ಪಡೆದಲ್ಲಿ ಘಟಕ ವೆಚ್ಚದ ಆಧಾರದ ಮೇಲೆ ಗರಿಷ್ಠ ರೂ. 5.00 ಲಕ್ಷಗಳವರೆಗೂ ಸಹಾಯಧನ ನೀಡಲಾಗುವುದು.

(ಘಟಕ ವೆಚ್ಚ 

ಸ್ವ.ಉ.ಯೋ-1 (ಘಟಕ ವೆಚ್ಚ ರೂ. 0 ಯಿಂದ - ರೂ. 5.00 ಲಕ್ಷದವರೆಗೆ ಶೇ. 70% ಅಥವಾ ಗರಿಷ್ಟ ರೂ. 3.50 ಲಕ್ಷ                                              ಸಹಾಯಧನ. ಉಳಿದ ಮೊತ್ತ ಬ್ಯಾಂಕ್ ಸಾಲ)

ಸ್ವ.ಉ.ಯೋ-2 (ಘಟಕ ವೆಚ್ಚ ರೂ. 5.00 ಲಕ್ಷ ಮೇಲ್ಪಟ್ಟು– ಶೇ. 60 ರಷ್ಟು ಅಥವಾ ಗರಿಷ್ಟ ರೂ. 5.00 ಲಕ್ಷ ಸಹಾಯಧನ.                                      ಉಳಿದ ಮೊತ್ತ ಬ್ಯಾಂಕ್ ಸಾಲ.)

https://akxeroxbidar.blogspot.com/

2. “ಸಂಚಾರಿ” ಮಾರಾಟ ಮಳಿಗೆ.

  • ಉದ್ದೇಶ 

ಚರ್ಮ ಕುಶಲಕರ್ಮಿ ಕುಟುಂಬದ ಅಕ್ಷರಸ್ಥ ಯುವಕ/ ಯುವತಿಯರು ಸ್ವಯಂ ಉದ್ಯೋಗ ಕೈಗೊಳ್ಳಲು ಅನುಕೂಲ ಮಾಡಿಕೊಡುವ ಉದ್ದೇಶ ಹೊಂದಲಾಗಿದೆ

  • ವಿವರಗಳು 

ಪಾರಂಪರಿಕ ಚರ್ಮ ಕುಶಲಕರ್ಮಿಗಳು ಅವರು ತಯಾರಿಸಿದ ಚರ್ಮೋತ್ಪನ್ನಗಳನ್ನು / ಇತರೆ ಸಂಬಂಧಿತ ಉತ್ಪನ್ನಗಳನ್ನು ಸಂಚಾರಿ ವಾಹನದ ಮೂಲಕ ಗ್ರಾಹಕರ ಮನೆ ಬಾಗಿಲಿಗೆ ಹೋಗಿ ಮಾರಾಟ ಮಾಡಲು ಅವಕಾಶ ಕಲ್ಪಿಸಿ ಸ್ವಯಂ ಉದ್ಯೋಗ ಒದಗಿಸುವ ಉದ್ದೇಶ ಹೊಂದಿದೆ.

ಈ ಚಟುವಟಿಕೆಗಳ ಮೂಲಕ ಕುಶಲಕರ್ಮಿಗಳು ತಯಾರಿಸಿದ ಉತ್ಪನ್ನಗಳನ್ನು ನೇರವಾಗಿ ಗ್ರಾಹಕರಿಗೆ ತಲುಪಿಸುವ ವ್ಯವಸ್ಥೆ ಕಲ್ಪಿಸಿದಂತಾಗುತ್ತದೆ.

ನಿಗಮದಿಂದ ಮೊಬೈಲ್ ಮಾರಾಟ ಮಳಿಗೆಯನ್ನು ವಿನ್ಯಾಸಗೊಳಿಸಿದ್ದು ಫಲಾನುಭವಿಗಳನ್ನು ಯಾವುದಾದರೂ ಒಂದನ್ನು ಆಯ್ಕೆ ಮಾಡಿಕೊಳ್ಳಬಹುದಾಗಿದೆ.

ಮೇಲಿನ ಆರ್ಥಿಕ ಚಟುವಟಿಕೆಗಳನ್ನು ಅನುಷ್ಟಾನಗೊಳಿಸಲು ಬ್ಯಾಂಕ್ ಸಾಲ ಪಡೆದಲ್ಲಿ ಘಟಕ ವೆಚ್ಚದ ಆಧಾರದ ಮೇಲೆ ಗರಿಷ್ಠ ರೂ. 5.00 ಲಕ್ಷಗಳವರೆಗೂ ಸಹಾಯಧನ ನೀಡಲಾಗುವುದು

  • ಘಟಕ ವೆಚ್ಚ

ಸ್ವ.ಉ.ಯೋ-1 (ಘಟಕ ವೆಚ್ಚ ರೂ. 0 ಯಿಂದ - ರೂ. 5.00 ಲಕ್ಷದವರೆಗೆ ಶೇ. 70% ಅಥವಾ ಗರಿಷ್ಟ ರೂ. 3.50 ಲಕ್ಷ                                            ಸಹಾಯಧನ. ಉಳಿದ ಮೊತ್ತ ಬ್ಯಾಂಕ್ ಸಾಲ)

ಸ್ವ.ಉ.ಯೋ-2 (ಘಟಕ ವೆಚ್ಚ ರೂ. 5.00 ಲಕ್ಷ ಮೇಲ್ಪಟ್ಟು– ಶೇ. 60 ರಷ್ಟು ಅಥವಾ ಗರಿಷ್ಟ ರೂ. 5.00 ಲಕ್ಷ ಸಹಾಯಧನ.                                      ಉಳಿದ ಮೊತ್ತ ಬ್ಯಾಂಕ್ ಸಾಲ.)

3. ದುಡಿಮೆ ಬಂಡವಾಳ ಸಹಾಯ ಯೋಜನೆ

  • ಉದ್ದೇಶ 

ಚರ್ಮ ಕುಶಲಕರ್ಮಿ ಕುಟುಂಬದ ಅಕ್ಷರಸ್ಥ ಯುವಕ/ ಯುವತಿಯರು ಸ್ವಯಂ ಉದ್ಯೋಗ ಕೈಗೊಳ್ಳಲು ಅನುಕೂಲ ಮಾಡಿಕೊಡುವ ಉದ್ದೇಶ ಹೊಂದಲಾಗಿದೆ

  • ವಿವರಗಳು 

ಕಚ್ಛಾಮಾಲು ಮಳಿಗೆ, ಚರ್ಮೋತ್ಪನ್ನಗಳ ಅಥವಾ ಚರ್ಮೇತರ ಉತ್ಪನ್ನಗಳ ತಯಾರಿಕಾ ಘಟಕ ಮತ್ತಿತರೆ ಸಂಬಂಧಿತ ವ್ಯಾಪಾರ/ ಚಟುವಟಿಕೆಗಳನ್ನು ಕೈಗೊಳ್ಳುವ ಸಲುವಾಗಿ ದುಡಿಮೆ ಬಂಡವಾಳ ಒದಗಿಸಲಾಗುವುದು.

ಮೇಲಿನ ಆರ್ಥಿಕ ಚಟುವಟಿಕೆಗಳನ್ನು ಅನುಷ್ಟಾನಗೊಳಿಸಲು ಬ್ಯಾಂಕ್ ಸಾಲ ಪಡೆದಲ್ಲಿ ಘಟಕ ವೆಚ್ಚದ ಆಧಾರದ ಮೇಲೆ ಗರಿಷ್ಠ ರೂ. 5.00 ಲಕ್ಷಗಳವರೆಗೂ ಸಹಾಯಧನ ನೀಡಲಾಗುವುದು.

ಘಟಕ ವೆಚ್ಚ

ಸ್ವ.ಉ.ಯೋ-1 (ಘಟಕ ವೆಚ್ಚ ರೂ. 0 ಯಿಂದ - ರೂ. 5.00 ಲಕ್ಷದವರೆಗೆ ಶೇ. 70% ಅಥವಾ ಗರಿಷ್ಟ ರೂ. 3.50 ಲಕ್ಷ                                         ಸಹಾಯಧನ. ಉಳಿದ ಮೊತ್ತ ಬ್ಯಾಂಕ್ ಸಾಲ)

ಸ್ವ.ಉ.ಯೋ-2 (ಘಟಕ ವೆಚ್ಚ ರೂ. 5.00 ಲಕ್ಷ ಮೇಲ್ಪಟ್ಟು– ಶೇ. 60 ರಷ್ಟು ಅಥವಾ ಗರಿಷ್ಟ ರೂ. 5.00 ಲಕ್ಷ ಸಹಾಯಧನ.                                         ಉಳಿದ ಮೊತ್ತ ಬ್ಯಾಂಕ್ ಸಾಲ.)

4. ಪಾದುಕೆ ಕುಟೀರ ಒದಗಿಸುವ ಯೋಜನೆ

  • ಉದ್ದೇಶ :

ಈ ಯೋಜನೆಯಡಿ ಸ್ಥಳೀಯ ಸಂಸ್ಥೆಗಳಿಂದ/ ಇತರೆ ಸಂಸ್ಥೆಗಳಿಂದ ಪರವಾನಗಿ ಪಡೆದ ಕುಶಲಕರ್ಮಿಗಳಿಗೆ ಪಾದುಕೆ ಕುಟೀರಗಳನ್ನು ಒದಗಿಸುವ ಮೂಲಕ ಸ್ವಯಂ ಉದ್ಯೋಗ ಕಲ್ಪಿಸಲು ಉದ್ದೇಶಿಸಲಾಗಿದೆ.

  • ವಿವರಗಳು :

ಚರ್ಮ ಕುಶಲಕರ್ಮಿಗಳಿಗೆ ಸ್ವಯಂ ಉದ್ಯೋಗ ಕಲ್ಪಿಸಿಕೊಡುವ ನಿಟ್ಟಿನಲ್ಲಿ ಅವರು ತಯಾರಿಸಿದ ಉತ್ಪನ್ನಗಳನ್ನು ಮಾರಾಟ ಮಾಡಲು/ ದುರಸ್ತಿ ಕಾರ್ಯ ಮಾಡಲು ಅನುವಾಗುವಂತೆ ಸಂಬಂಧಪಟ್ಟ ಸ್ಥಳೀಯ ಪ್ರಾಧಿಕಾರಗಳಿಂದ / ಇಲಾಖೆಗಳಿಂದ ಪರವಾನಗಿ ಪಡೆದು ಅರ್ಜಿ ಸಲ್ಲಿಸಿದಲ್ಲಿ ಪಾದುಕೆ ಕುಟೀರಗಳನ್ನು ಸ್ಥಾಪಿಸಿಕೊಡಲಾಗುವುದು.

ಕುಶಲಕರ್ಮಿಗಳು ತಯಾರಿಸಿದ ಉತ್ಪನ್ನಗಳಿಗೆ ಮಾರುಕಟ್ಟೆ ದೊರಕಿಸಿಕೊಡುವುದು ಮತ್ತು ಅವರ ಜೀವನೋಪಾಯಕ್ಕೆ ಆದಾಯಗಳಿಸುವ ಉದ್ದೇಶ ಹೊಂದಲಾಗಿದೆ.

https://akxeroxbidar.blogspot.com/

  • ಘಟಕ ವೆಚ್ಚ :

ರೂ. 85,904/- ಪಾದುಕೆ ಕುಟೀರದ ಜೊತೆಗೆ ರೂ. 3,600/- ಬೆಲೆಯ ಉಪಕರಣ ಪೆಟ್ಟಿಗೆ ಉಚಿತವಾಗಿ ನೀಡಲಾಗುವುದು

ಫಲಾನುಭವಿಗಳ ಆಯ್ಕೆಗೆ ನಿಗಧಿಪಡಿಸಿರುವ ಸಾಮಾನ್ಯ ಅರ್ಹತೆಗಳು ಮತ್ತು ಮಾನದಂಡಗಳು

  • ಸಾಮಾನ್ಯ ಅರ್ಹತೆಗಳು :

  1.  ಚರ್ಮ ಕುಶಲಕರ್ಮಿಗಳು ಪರಿಶಿಷ್ಟ ಜಾತಿಯಲ್ಲಿ ಬರುವ ಮಾದಿಗ, ಸಮಗಾರ, ಡೋರ, ಆದಿಜಾಂಬವ, ಮಚಗಾರ, ಮೋಚಿ ಸಮುದಾಯಗಳಿಗೆ ಸೇರಿದಕುಟುಂಬದವರಾಗಿರಬೇಕು.
  2.  ಕರ್ನಾಟಕರಾಜ್ಯದ ನಿವಾಸಿಯಾಗಿರಬೇಕು.
  3.  ಕನಿಷ್ಟ 18 ವರ್ಷ ವಯಸ್ಸು ಮೀರಿರಬೇಕು ಮತ್ತು 50 ವರ್ಷದ ಒಳಗಿರಬೇಕು.
  4.  ಅರ್ಜಿದಾರರ ಕುಟುಂಬದ ವಾರ್ಷಿಕ ವರಮಾನವು ಗ್ರಾಮೀಣ ಪ್ರದೇಶದಲ್ಲಿ ರೂ.1,50,000/- ಮತ್ತು ನಗರ ಪ್ರದೇಶದವರಿಗೆ ರೂ. 2,00,000/- ಗಳ ಮಿತಿ ಒಳಗಿರಬೇಕು
  5.  ವಿಕಲಚೇತನರಿಗೆ ಶೇಕಡ 3 ರಷ್ಟು ಆದ್ಯತೆ ನೀಡಬೇಕು.
  6.  ಸ್ವ-ಸಹಾಯ ಸಂಘಗಳನ್ನು ರಚಿಸಿಕೊಂಡಿರುವ ಕುಶಲಕರ್ಮಿಗಳಿಗೆ ಆದ್ಯತೆ.


  • ನಿಯಮಗಳು :

  1.  ಅರ್ಜಿದಾರರು/ ಕುಟುಂಬದ ಅವಲಂಭಿತ ಸದಸ್ಯರು ಸರ್ಕಾರಿ/ ಅರೆಸರ್ಕಾರಿ ಯಾವುದೇ ನೌಕರಿಯಲ್ಲಿ ಇರಬಾರದು.
  2.  ಒಂದು ಕುಟುಂಬದಲ್ಲಿ ಒಬ್ಬ ಕುಶಲಕರ್ಮಿಗೆ ಮಾತ್ರ ಅವಕಾಶ ನೀಡುವುದು (ಕುಟುಂಬ ಎಂದರೆ ಗಂಡ, ಹೆಂಡತಿ ಮತ್ತು ಮದುವೆಯಾಗದ ಮಕ್ಕಳು)
  3.  ಮಂಜೂರಾತಿ ಪಡೆದ ಫಲಾನುಭವಿಯು ಅನರ್ಹರೆಂದು ಕಂಡುಬಂದಲ್ಲಿ ಮಂಜೂರಾತಿಯನ್ನು ಯಾವುದೇ ಹಂತದಲ್ಲಿ ರದ್ದು ಪಡಿಸಲಾಗುತ್ತದೆ.


  • ಅನುಷ್ಟಾನ ವಿಧಾನ :

  1.  ಯೋಜನೆ ಅನುಷ್ಟಾನಗೊಳಿಸುವ ಮುನ್ನ ಯೋಜನೆ ಬಗ್ಗೆ ಸ್ಧಳೀಯವಾಗಿ ಪ್ರಚಾರ ಮಾಡಿ ಅರ್ಜಿಗಳನ್ನು ಅಹ್ವ್ವಾನಿಸುವುದು. ತಾಲ್ಲೂಕು ಸಮಾಜ ಕಲ್ಯಾಣಾಧಿಕಾರಿಗಳ ಕಛೇರಿಯಲ್ಲಿ ಅರ್ಜಿಗಳನ್ನು ವಿತರಿಸಲಾಗುವುದು.
  2.  ಕೊನೆಯ ದಿನಾಂಕದ ನಂತರ ನಿಗಮದ ಜಿಲ್ಲಾ ಸಂಯೋಜಕರು ತಾಲ್ಲೂಕು ಸಮಾಜ ಕಲ್ಯಾಣಾಧಿಕಾರಿಗಳಿಂದ ಅರ್ಜಿಗಳನ್ನು ಕ್ರೋಡಿಕರಿಸಿ ಪರಿಶೀಲನೆ ನಂತರ ಅರ್ಹ ಕುಶಲಕರ್ಮಿಗಳ ಪಟ್ಟಿ ಸಿದ್ಧಪಡಿಸಿ ಸಂಬಂಧಪಟ್ಟ ಕ್ಷೇತ್ರದ ಶಾಸಕರ ಗಮನಕ್ಕೆ ತಂದು ಜಿಲ್ಲಾ ಸಮಿತಿ ಮುಂದೆ ಮಂಡಿಸುವುದು.
  3.  ಜಿಲ್ಲಾ ಸಮಿತಿಯು ಜಂಟಿ ನಿರ್ದೇಶಕರು / ಉಪ ನಿರ್ದೇಶಕರು, ಸಮಾಜ ಕಲ್ಯಾಣ ಇಲಾಖೆ ಇವರ ಅಧ್ಯಕ್ಷತೆಯಲ್ಲಿ ಈ ಕೆಳಕಂಡ ಸದಸ್ಯರೊಂದಿಗೆ ಕಾರ್ಯ ನಿರ್ವಹಿಸುವುದು  https://akxeroxbidar.blogspot.com/
  4.  ಮೇಲಿನ ಸಮಿತಿಯು ಫಲಾನುಭವಿಗಳನ್ನು ಆಯ್ಕೆ ಮಾಡಿದ ನಂತರ ದೃಢೀಕರಣ ಪಡೆದು ನಿಗಮದ ಜಿಲ್ಲಾ ಸಂಯೋಜಕರು ಪಟ್ಟಿಯನ್ನು ಪ್ರಧಾನ ಕಛೇರಿಗೆ ಸಲ್ಲಿಸುವುದು.
  5.  ಆಯ್ಕೆ ಪಟ್ಟಿಗೆ ವ್ಯವಸ್ಥಾಪಕ ನಿರ್ದೇಶಕರ ಆಡಳಿತಾತ್ಮಕ ಅನುಮೋದನೆ ಪಡೆದು ಆಯ್ಕೆ ಪಟ್ಟಿಯನ್ನು ಸಂಬಂಧಿಸಿದ ಜಿಲ್ಲಾ ಘಟಕಗಳ ಸೂಚನಾ ಫಲಕದಲ್ಲಿ ಪ್ರಕಟಿಸುವುದು ನಂತರ ಯೋಜನೆಯನ್ನು ಅನುಷ್ಟಾನಗೊಳಿಸುವುದು.


  • ಅರ್ಜಿದಾರರು ಸಲ್ಲಿಸಬೇಕಾದ ದಾಖಲಾತಿಗಳು :

  1.  ಇತ್ತೀಚಿನ ಜಾತಿ ಮತ್ತು ಆದಾಯ ಪ್ರಮಾಣ ಪತ್ರ (ಆರ್.ಡಿ ಸಂಖ್ಯೆ ಹೊಂದಿರಬೇಕು.)
  2.  ಶೈಕ್ಷಣಿಕ ಪ್ರಮಾಣ ಪತ್ರಗಳು (ಲಭ್ಯವಿದ್ದಲ್ಲಿ)
  3.  ಆಧಾರ್ ಕಾರ್ಡ್ ಕಡ್ಡಾಯ.
  4.  ಪಡಿತರ ಚೀಟಿ /ಚುನಾವಣೆ ಗುರುತಿನ ಚೀಟಿ.
  5.  ಬ್ಯಾಂಕ್ ಪಾಸ್ ಬುಕ್‍ನ ಪ್ರತಿ.
  6.  ವೃತ್ತಿ ಪ್ರಮಾಣ ಪತ್ರ.   https://akxeroxbidar.blogspot.com/
dr babu jagjivan loan scheme 2022

click here more 


LAST DATE  15-09-2022


APPLYING ONLINE : SEVA SINDHU 

No comments:

Post a Comment