Tuesday, August 23, 2022

ಕರ್ನಾಟಕ ಆದಿಜಾಂಬವ ಅಭಿವೃದ್ಧಿ ನಿಗಮ 2022 -Self-Employment Schemes - Direct loan scheme -adijambava karnataka loan scheme 2022-adijambava karnataka loan scheme2022

           ಕರ್ನಾಟಕ ಆದಿಜಾಂಬವ ಅಭಿವೃದ್ಧಿ ನಿಗಮ

https://akxeroxbidar.blogspot.com/

ಸರ್ಕಾರದ ವಿವಿಧ ಯೋಜನೆಗಳ ಪ್ರಯೋಜನಗಳನ್ನು ಪರಿಶಿಷ್ಟ ಜಾತಿ ಪಟ್ಟಿಯಲ್ಲಿರುವ ವಿವಿಧ ಜಾತಿಗಳಿಗೆ ಸಮನಾಗಿ ದೊರಕಿಸಿಕೊಟ್ಟು ಸಾಮಾಜಿಕ ನ್ಯಾಯವನ್ನು ಒದಗಿಸುವ ಉದ್ದೇಶದಿಂದ ಈಗಾಗಲೇ ಬಂಜಾರ ಸಮುದಾಯಗಳಿಗೆ ತಾಂಡಾ ಅಭಿವೃದ್ಧಿ ನಿಗಮವನ್ನು ಸ್ಥಾಪಿಸಲಾಗಿದೆ.ಅದೇ ರೀತಿ ಭೋವಿ / ವಡ್ಡರ್ ಸಮುದಾಯಗಳ ಅಭಿವೃದ್ಧಿಗಾಗಿ ಕರ್ನಾಟಕ ಭೋವಿ ಅಭಿವೃದ್ಧಿ ನಿಗಮವನ್ನು ಸ್ಥಾಪಿಸಿದೆ.ಆದುದರಿಂದ ಪರಿಶಿಷ್ಟ ಜಾತಿಯಲ್ಲಿರುವ ಮಾದಿಗ ಮತ್ತು ಅದರ ಸಂಬಂಧಿತ ಜಾತಿಗಳಿಗೆ ಡಾ.ಬಿ.ಆರ್.ಅಂಬೇಡ್ಕರ್ ಅಭಿವೃದ್ಧಿ ನಿಗಮ ಜಾರಿಗೊಳಿಸುತ್ತಿರುವ ಎಲ್ಲಾ ಯೋಜನೆ/ ಕಾರ್ಯಕ್ರಮಗಳನ್ನು ಅನುಷ್ಟಾನಗೊಳಿಸಲು "ಕರ್ನಾಟಕ ಆದಿಜಾಂಬವ ಅಭಿವೃದ್ಧಿ ನಿಗಮ" ವನ್ನು ಸ್ಥಾಪಿಸಲು ಆದೇಶ ಹೊರಡಿಸಲಾಗಿದೆ. ಈ ನಿಗಮದ ನೋಂದಣಿ ಮತ್ತಿತರೆ ಪ್ರಾರಂಭಿಕ ಕೆಲಸಗಳು ಪೂರ್ಣಗೊಂಡಿದ್ದು ಸನ್ಮಾನ್ಯ ಮುಖ್ಯಮಂತ್ರಿಗಳು ದಿನಾಂಕ: 17-01-2019 ರಂದು ಈ ನಿಗಮವನ್ನು ಲೋಕಾರ್ಪಣೆ ಮಾಡಿರುತ್ತಾರೆ.


ಕರ್ನಾಟಕ ಆದಿಜಾಂಬವ ಅಭಿವೃದ್ಧಿ ನಿಗಮವು ಪ್ರತ್ಯೇಕವಾಗಿ ಪರಿಶಿಷ್ಟ ಜಾತಿಯಲ್ಲಿರುವ ಮಾದಿಗ ಮತ್ತು ಅದರ ಸಂಬಂಧಿತ ಜಾತಿಗಳ ಸಮಗ್ರ ಅಭಿವೃದ್ಧಿಗಾಗಿ ಸರ್ಕಾರ ವಹಿಸುವ/ನಿಗದಿಪಡಿಸುವ ಯೋಜನೆ/ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸುವುದು.

ಕರ್ನಾಟಕದಲ್ಲಿ ವಾಸಿಸುತ್ತಿರುವ ಮಾದಿಗ ಮತ್ತು ಸಂಬಂಧಿತ ಸಮುದಾಯದ ಅಭಿವೃದ್ಧಿಯನ್ನು ಗಮನದಲ್ಲಿರಿಸಿಕೊಂಡು ಕರ್ನಾಟಕ ಆದಿಜಾಂಬವ ಅಭಿವೃಧ್ಧಿ ನಿಗಮವನ್ನು ಸ್ಥಾಪಿಸಲಾಗಿದೆ. ಪರಿಶಿಷ್ಟ ಜಾತಿ ಪಟ್ಟಿಯಲ್ಲಿ ಬರುವ 101 ಜಾತಿಗಳ ಅಧಿಸೂಚನೆ ಆಧಾರದ ಮೇಲೆ ಮಾದಿಗ ಮತ್ತು ಸಂಬಂಧಿತ ಜಾತಿಗಳ ಐತಿಹಾಸಿಕ ಹಿನ್ನೆಲೆ, ಸಾಂಸ್ಕತಿಕ ಒಡನಾಟ, ಸಾಂಪ್ರದಾಯಿಕ ಉದ್ಯೋಗ, ಪ್ರಾದೇಶಿಕ ಭಾಷೆಗಳು, ಹಬ್ಬಗಳ ಆಚರಣೆಗಳನ್ನು ಆಧರಿಸಿ ಪರಿಶಿಷ್ಟ ಜಾತಿಯ 16 ಜಾತಿ ಹಾಗೂ ಸಮೂಹಗಳನ್ನು ಗುರುತಿಸಿ ಅವರುಗಳಿಗೆ ಕರ್ನಾಟಕ ಆದಿಜಾಂಬವ ಅಭಿವೃಧ್ಧಿ ನಿಗಮದಿಂದ ಯೋಜನೆಗಳ ಸೌಲಭ್ಯಗಳನ್ನು ಒದಗಿಸಲು ಯೋಜನೆಗಳನ್ನು ಜಾರಿಗೊಳಿಸಲಾಗುತ್ತಿದೆ.


(1) ಅರುಂತತಿಯರ್, 2) ಭಂಗಿ, ಮೆಹ್ತಾರ್, ಓಲ್ಗಣ, ರುಖಿ, ಮಲ್ಕಣ, ಹಲಾಲ್ಕೋರ್, ಲಾಲ್ಬೇಗಿ, ಬಾಲ್ಮಕಿ, ಕೋರಾರ್, ಜಾಡಮಾಲಿ, 3) ಭಂಬಿ, ಭಂಭಿ, ಅಸದರು, ಅಸೂಡಿ, ಚಮ್ಮಾದಿಯ, ಚಮಾರ್, ಚಾಂಬಾರ್, ಚಂಮ್ಗಾರ್, ಹರಳಯ್ಯ, ಹರಳಿ, ಖಲ್ಪ, ಮಚ್ಗಾರ್, ಮೊಚಿಗಾರ್, ಮಾದಾರ್, ಮಾದಿಗ್, ಮೋಚಿ, ಮುಚಿ, ತೆಲೆಗುಮೊಚಿ, ಕಮಟಿಮೊಚಿ, ರಾಣ ಗಾರ್, ರೋಹಿದಾಸ್, ರೋಹಿತ್, ಸಮಗಾರ್, 4) ಬಿಂದ್ಲ, 5) ಚಕ್ಕಿಲಿಯನ್, 6) ದಕ್ಕಲ್, ದೊಕ್ಕಲ್ವಾರ್, 7) ದಕ್ಕಲಿಗ, 8) ದೋರ್, ಕಕ್ಕಯ್ಯಾ, ಕಂಕಯ್ಯಾ, 9) ಜಾಂಬುವುಲು, 10) ಮಚಲ, 11) ಮಾದಿಗ, 12) ಮಂಗ್, ಮಾತಂಗ, ಮಿನಿಮಾದಿಗ್,13) ಮಂಗ್ ಗರುಢಿ, ಮಂಗ್ ಗರೋಢಿ, 14) ಮಾಸ್ತೀ, 15) ಸಮಗಾರ, 16) ಸಿಂದೋಳ್ಳು, ಚಿಂದೋಳ್ಳು).


ರಾಜ್ಯದ ಎಲ್ಲಾ 30 ಜಿಲ್ಲೆಯ ಜಿಲ್ಲಾ ಕೇಂದ್ರದಲ್ಲಿ ಜಿಲ್ಲಾ ವ್ಯವಸ್ಥಾಪಕರು, ಡಾ. ಬಿ.ಆರ್. ಅಂಬೇಡ್ಕರ್ ಅಭಿವೃದ್ಧಿ ನಿಗಮ ಇವರು ಈ ನಿಗಮದ ಕಾರ್ಯಕ್ರಮಗಳ ಅನುಷ್ಠಾನ ಅಧಿಕಾರಿಗಳಾಗಿರುತ್ತಾರೆ.


ಪರಿಶಿಷ್ಟ ಜಾತಿಯಲ್ಲಿರುವ ಮಾದಿಗ ಮತ್ತು ಅದರ ಸಂಬಂಧಿತ ಜಾತಿಗಳ ಆರ್ಥಿಕ ಅಭಿವೃದ್ಧಿಗಾಗಿ ಡಾ.ಬಿ.ಆರ್.ಅಂಬೇಡ್ಕರ್ ಅಭಿವೃದ್ಧಿ ನಿಗಮ ಅನುಷ್ಟಾನಗೊಳಿಸುತ್ತಿರುವ ಎಲ್ಲಾ ಯೋಜನೆ/ ಕಾರ್ಯಕ್ರಮಗಳನ್ನು “ಕರ್ನಾಟಕ ಆದಿಜಾಂಬವ ಅಭಿವೃದ್ಧಿ ನಿಗಮ” ದ ಮೂಲಕ ಅನುಷ್ಠಾನಗೊಳಿಸಲಾಗುವುದು



ಕರ್ನಾಟಕ ಆದಿಜಾಂಬವ ಅಭಿವೃದ್ಧಿ ನಿಗಮ 2022-23

ಯೋಜನೆಗಳ 2022-23 

1) ಸಮಗ್ರ ಗಂಗಾ ಕಲ್ಯಾಣ ಯೋಜನೆ

2) ಸ್ವಯಂ ಉದ್ಯೋಗ ಯೋಜನೆಗಳು - ನೇರ ಸಾಲ ಯೋಜನೆ

3 ) ಸ್ವಯಂ ಉದ್ಯೋಗ ಯೋಜನೆಗಳು - ಉದ್ಯಮ ಶೀಲತಾ ಅಭಿವೃದ್ಧಿ ಯೋಜನೆ

4) ಭೂ ಒಡೆತನ ಯೋಜನೆ

5) ಮೈಕ್ರೋ ಕ್ರೆಡಿಟ್ ಯೋಜನೆ


https://akxeroxbidar.blogspot.com

No comments:

Post a Comment